ಕವಿತಾकविताPoem
ಆಂಕ್ಡೊ - 11
This poem is available in its original Kannada only.
ಎಕಾ ಕುಟ್ಮಾಂತ್ ಸ್ತ್ರೀಯೆಚೆಂ ಸ್ಥಾನ್-ಮಾನ್ ಆನಿ ಸಾಕ್ರಿಫಿಸಾವಿಶಿಶಿಂ ಆಮಿ ಕಿತ್ಲೆಂ ವಾಚುನ್/ಸಮ್ಜುನ್ ಆಯ್ಲ್ಯಾಂವ್ ತರ್‌ಯೀ, ಜಾಯ್ತ್ಯೊ ಸಂಗ್ತ್ಯೊ ಆಮ್ಚ್ಯಾ ಗಮನಾಕ್ ವಚಾನಾಂತ್. ಏಕ್ ಸ್ತ್ರೀ ನದರ್ ಮಾತ್ರ್ ಹೆಂ ಪಳೆಂವ್ಕ್/ಪಾರ್ಕುಂಕ್ ಸಕ್ತಾ. ದೆಕುನ್ ಹ್ಯಾ ಕವಿತೆಂತ್ ಸಯ್ತ್ ಆಶಾ ಅತ್ರೆಗಾಂಕ್ ಆಯ್ದಾನಾಂ ಧುಂವ್ಚ್ಯಾ ಮೊರಿಯೆಂತ್ ವ್ಹಾಳಂವ್ಚಾ ಎಕಾ ಆವಯ್ಚ್ಯಾ ಉಮಾಳ್ಯಾಂಚಿ ಕಾಣಿ ಲಿಪ್ಲ್ಯಾ. ಅಪ್ಲ್ಯಾ ಕುಟ್ಮಾಚ್ಯಾ ಸಾಂದ್ಯಾಂಚ್ಯಾ ಸಮಧಾನೆಪಾಸತ್ ಅಪ್ಲಿಂ ಸ್ವಪ್ಣಾಂ ವರುನ್ ಲಾಸುನ್ ತೊ ಗೊಬೊರ್ ಭಾಯ್ರ್ ಉಡಂವ್ಚಿ ಕಾಣಿ ಸಯ್ತ್ ಹಿ ಕವಿತಾ ಸಾಂಗುನ್ ವೆತಾನಾ ಖರೆಂಚ್ ಭಗ್ತಾ, ಹ್ಯಾ ಸಂಸಾರಾಂತ್ ಆವಯ್ ತಿತ್ಲಿ ವರ್ತಿ ಸಕತ್ ದುಸ್ರಿ ನಾ.
ಬಾಯ್ ಶೀಲಾ ಭಂಡಾರ್‌ಕರ್ ಕಾನಡಿಂತ್ ಸರಾಗ್ ಬರಯ್ತಾ ಪುಣ್ ಕೊಂಕ್ಣಿ ಮುಳಾಚಿ ಕವಯತ್ರಿ ಹಿ, ಕವಿತಾ ಜಾಂವ್, ಕಾಣಿ ಜಾಂವ್, ಹಿಚ್ಯಾ ಬರ್ಪಾಂನಿ ದಿಸ್ಚಿ ಸಮಾಜಿಕ್ ನದರ್ ಅಪುರ್ಭಾಯೆಚಿ. ಆಧ್ಲ್ಯಾ ವರ್ಸಾಪರಿಂಚ್ ಹ್ಯಾ ವರ್ಸಾ ಸಯ್ತ್ ಹಿಚೆ ಥಾವ್ನ್ ಅಪುರ್ಭಾಯೆಚಿ ಕವಿತಾ. (ಮೂಳ್ ಕವಿತಾ ತಶೆಂಚ್ ಕೊಂಕ್ಣಿ ತರ್ಜಣ್ ದಿಲಾಂ)
ಆಂಕ್ಡೊ - 11
ಕೊಣ್ ಹಿ?
ಕುಜ್ನಾಂತ್ ದೂದ್
ಖತ್ಕತ್ಚಾಧಿಂ ಧಾಂವುನ್
ಉಜೊ ಧಾಂಪ್ತಲಿ
ಗುಂತುನ್ ದವರ್ಲೆಲ್ಯಾ
ಮಧುರ್ ಖಿಣಾಂಚಿಂ
ಸ್ವಪ್ಣಾಂ ವ್ಹಾಳುನ್ ಗೆಲ್ಯಾರೀ
ಪಳೆನಾಸ್ಲೆಪರಿಂ ವೊಗೆಚ್ಚ್ ಬೊಸ್ಚಿ
ಭಾಕ್ರಿ ಕರ್ಪಾನಾಶೆಂ ಜಾಗ್ರುತೆನ್
ಭಾಜುನ್ ದಿತಲಿ..
ಕಿತ್ಲೆಶ್ಯಾಗೀ ಆಶೆಂಕ್ ಲಾಸುನ್
ಗೊಬೊರ್ ಕರ್ನ್ ಭಾಯ್ರ್ ಉಡಯ್ತೆಲಿ
ಆಯ್ದನಾಂ ಪಡುನ್ ಚೆಂಚಾನಾಶೆಂ
ಪಳೆಯ್ತಲಿ
ಅಪ್ಲ್ಯಾ ಹುಮೆದ್, ಉತ್ಸಾಹಾಂಕ್
ಅಪುಣ್ಂಚ್ ಪರ್ತವ್ನ್ ಘಾಲ್ತಲಿ
ವಸ್ತ್ರಾಂಚಿಂ ಖತಾಂ
ಜಾಗ್ರೂತ್ಕಾಯೆನ್ ನಿತಳ್ ಕರ್ತಲಿ
ಅಶಕ್ತ್ ಸಭ್ದಾಂಕ್ ಬರಯಿಲ್ಲ್ಯಾ
ಚುರ್ಚುರೆಚ್ಯಾ ಗಸಿಂಕ್
ಹರ್ಧ್ಯಾಚ್ಯಾ ದೊರ್‍ಯಾವಯ್ಲಿಂ
ಪುಸ್ತಲಿ
ಕಯ್ದ್ ಕೆಲ್ಲ್ಯಾ ಅತ್ರೆಗಾಂಕ್
ವಿಸರ್ಚೆ ಪಾಸತ್
ಕುಜ್ನಾಕ್‌ಚ್ ಘಟ್ಟ್ ಕರುನ್
ಧಾಂಪ್ಣ್ಯಾಚ್ಯಾ ದಬ್ಬ್ಯಾಭಿತರ್
ಧಾಂಪುನ್ ಸಂತೊಸ್ ಪಡ್ತಲಿ
ಸರ್ವಾಂಚ್ಯಾ ದುಖಿಕ್ ಸ್ಪಂದುನ್
ಅಪ್ಣಾಚೆಂ ಆಸ್ಚೆಂ ಸರ್ವ್‌ಯೀ
ಆಯ್ದಾನಾಂ ಧುಂವ್ಚಾ ಮೊರಿಯೆಂತ್‌ಚ್
ವ್ಹಾಳುಂಕ್ ಸೊಡ್ತಲಿ
ಮೊಗಾಚೆ ಸರ್ವ್ ಹವ್ಯಾಸ್
ವಸ್ತ್ರಾಂಚ್ಯಾ ಗಡಿಯೆಭಿತರ್
ದೊಡುನ್ ಬಾಗಿಲ್ ಧಾಂಪ್ತಲಿ
***
[ಕಾನಡಿ ಮೂಳ್: ಶೀಲಾ ಭಂಡಾರ್‌ಕರ್. ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]
ಶೀಲಾ ಭಂಡಾರ್‌ಕಾರ್: ಹಿಚ್ಯಾ ಕವಿತೆಂನಿ ತಶೆಂಚ್ ಕಾಣ್ಯಾಂನಿ ಉಟೊನ್ ದಿಸ್ಚೆಂ ಜಾವ್ನಾಸಾ ಮನ್ಶಾಮೋಗ್ ಆನಿ ಮನ್ಶಾಂ ಮೌಲ್ಯಾಂ. ಕಾನಡಿ ಭಾಸೆಂತ್ ಸಯ್ತ್ ಸರಾಗ್ ಬರಂವ್ಚಿ ಹಿ ಸ್ತ್ರೀ ಸಂವೇದನಾಂಕ್ ಸ್ಪಂದನ್ ಕರ್ಚೆ ತಸಲಿ ಕೊಂಕ್ಣೆಂತ್ಲಿ ಅಪ್ರೂಪ್ ಕವಯತ್ರಿ. ಕವಿತಾ, ಕಾಣ್ಯೊ ಆನಿ ಲೇಖನಾಂ ಬರಂವ್ಚಿ ಶೀಲಾ ಬಾಯೆನ್ ಥೊಡ್ಯಾ ಕವಿತಾಗೋಶ್ಟಿಂನಿ ಕವಿತಾವಾಚನ್ ಕೆಲ್ಯಾತ್.
ಯಾರಿವಳು? (ಮೂಳ್ ಕವಿತಾ)
ಅಡುಗೆಮನೆಯಲ್ಲಿ ಹಾಲು
ಉಕ್ಕುವುದರೊಳಗೆ ಓಡಿ
ಅದನ್ನು ತಪ್ಪಿಸುವವಳು.
ಹೆಣೆದಿಟ್ಟ ಮಧುರ ಕ್ಷಣಗಳ
ಕನಸುಗಳು ಹರಿದುಹೋದರೂ
ಕಾಣದಂತೆ ಸುಮ್ಮನಿರುವಳು.
ರೊಟ್ಟಿ ಕರಕಾಗದಂತೆ ಎಚ್ಚರಿಕೆಯಿಂದ ಬೇಯಿಸಿಕೊಡುವವಳು..
ಎಷ್ಟೋ ಆಸೆಗಳನ್ನು ಸುಟ್ಟು
ಬೂದಿ ಮಾಡಿ ಎಸೆದು ಬಿಡುವಳು.
ಪಾತ್ರೆಗಳು ಬಿದ್ದು ತಗ್ಗುನುಗ್ಗಾಗದಂತೆ
ನೋಡಿಕೊಳ್ಳುವವಳು.
ತನ್ನ ಹುಮ್ಮಸ್ಸು, ಉತ್ಸಾಹಗಳನ್ನು
ತಾನೇ ಹೊಸಕಿ ಹಾಕುವಳು.
ಬಟ್ಟೆಯ ಕಲೆಗಳನ್ನು ಜಾಣ್ಮೆಯಿಂದ
ತೊಡೆಯುವವಳು..
ಅಶಕ್ತ ಶಬ್ಧಗಳನ್ನು ಬರೆದ
ವಿಷಾದದ ಮಸಿಯನ್ನು
ಎದೆಯ ಗೋಡೆಯ ಮೇಲಿಂದ
ಅಳಿಸಿಹಾಕುವಳು.
ಬಂಧಿಸಿಟ್ಟು ಆಕಾಂಕ್ಷೆಗಳ
ಮರೆಯಲೋಸುಗ.
ಅಡುಗೆ ಮನೆಯ ಗಟ್ಟಿ
ಮುಚ್ವಳದ ಡಬ್ಬಿಯೊಳಗೆ
ಮುಚ್ಚಿಟ್ಟು ಆನಂದ ಪಡುವಳು.
ಎಲ್ಲರ ನೋವಿಗೆ ಸ್ಪಂದಿಸುತ್ತಾ
ತನ್ನದೇನಿದೆಯೋ ಎಲ್ಲವನ್ನೂ
ಪಾತ್ರೆ ತೊಳೆಯುವ ಸಿಂಕಿನಲ್ಲೇ
ಹರಿಯಬಿಡುವವಳು.
ಪ್ರೀತಿಯ ಹವ್ಯಾಸಗಳನೆಲ್ಲ
ಬಟ್ಟೆಯ ಮಡಿಕೆಯೊಳಗೆ
ಮಡಚಿಟ್ಟು ಬಾಗಿಲು ಮುಚ್ಚುವಳು.
***
More in Poinnari
ಕವಿತಾकविताPoem Feb 2025
Rosteadegechem ful [Diana Sharal Lobo]
ಕವಿತಾकविताPoem Oct 2020
Ken'nam punni utt'teleat ... (- Wilma Bantwal)
ಕವಿತಾकविताPoem Nov 2016
ಎಕಾ ಫೊಂಡಾಚಿ ಕಥಾ
Send your comments to author on this writing
This is not a comment box. Nothing you write here appears on the site or is shown to any other reader: it is sent to him by email, privately, and he replies to you directly if a reply is called for.